ಪರಿಚಯ

ಇರುವ  ಊರು ದೂರಾದರೇನು, 
ಆಡುವ ಭಾಷೆ ಬೇರಾದರೇನು,
ಭಾವಗಳು ಒಂದಾದರೆ ಸಾಲದೇ.
ಸುಟ್ಟು ಮನದೊಳಗಣ ಸಂಶಯ,
ಮೌನವ ಮುರಿದು ಒಂದೆರಡು ಮಾತುಗಳಾಡಿ,
ಬೆಳೆಸೋಣ ಬನ್ನಿ ಪರಿಚಯ.
 
 
 
 
By Shivu...

ಮನದಾಳದ ಮಾತು

ಮನದಾಳದ ಮಾತು,
ನಿನ್ನ ಎದುರಲ್ಲಿ ನಿಂತು,
ಹೇಳುವುದರಲ್ಲೇ ಮರೆತ್ಹೋಯಿತು.

ನನ್ನೀ ಕಂಗಳ ಇಣುಕಿ ನೋಡು,
ಮರೆತ ಆ ಮಾತಿನ ಭಾವವು,
ಇನ್ನು ಮಿಂಚಂತೆ ಹೊಳೆಯುತಿಹುದು.



By Shivu...

ಹೃದಯ ಸೆರೆ ಸೌಗಂಧ .

ಮಂದಸ್ಮಿತ ಮುಗುಳ್ನಗೆಗೆ ಮನ ಸೋತು ನಿಂತಿಹೆನು,
ನನ್ನ ಮನಸ್ಸಿಗ ಕಳುವಾಯಿತು ನಿನಗೆ ಕಾಣದೆನು?
ಕಂಡಿಹೆನು ನನ್ನ ಮನಸ್ಸಾ ನಿನ್ನ ಹೃದಯ ಸೆರೆಯಲ್ಲಿ,
ನನಗಲ್ಲಿಂದ ಬಿಡುಗಡೆಯೇ ಇಲ್ಲವೇನು?

ಬಿಡುಗಡೆಯು ಎಕೆನಗೆ ಇರಲು ಸುಖ ಸೆರೆಯಲ್ಲಿ,
ಅದರಲ್ಲಿಯೇ ಇರಗೊಡು ನನಗೆ ನಿನ್ನ ಮನಸಲಿ,
ಸೆರೆಯಲ್ಲ ತುಂಬಿರಲು ಪ್ರೀತಿ ಸುಮದ ಸೌಗಂಧ,
ಆ ಸೌಗಂಧವನು ಹೀರುತಿಹೆ ಹೃದಯ ಅಂತರಾಳದಿಂದ.



By : Muralidhar Krishnamurthy

ನೆನಪು

ನೆನಪುಗಳ ನೆನಪಲ್ಲಿ ನೆನಪಾದ ನೆನಪೊಂದು,
ನೆನಪುಗಳ ನೆನಪಲ್ಲಿ ನೆನಪಾದ ನೆನಪೊಂದು,

ನೆನಪಿರುವವರೆಗೂ ನೆನಪಿರಲಿ ನನ್ನ ನೆನಪು....
 
 
By ಬಸವರಾಜ್ ಚಕಡಿ 

ದೀಪ, ಮುತ್ತು, ಪುಷ್ಪ

ಮನದ ಮ೦ದಿರದಲ್ಲಿ ಬೆಳಗಿದ ಪ್ರೀತಿಯ ದೀಪ ನೀನು..
ಹೃದಯ ಸಮುದ್ರದಲ್ಲಿ ಸಿಕ್ಕ ಪ್ರೀತಿಯ ಮುತ್ತು ನೀನು...
ಕಣ್ಣ ಕೊಳದಲ್ಲಿ ಅರಳಿದ ಪ್ರೀತಿಯ ಪುಷ್ಪ ನೀನು...
ನೆನಪಿರಲಿ ಪ್ರೀಯೆ....
ದೀಪ ಆರದಿರಲಿ,ಮುತ್ತು ಒಡೆಯದಿರಲಿ,ಪುಷ್ಪ ಬಾಡದಿರಲಿ.....

By
ವರದಾ....

ಬಗ್ನ ಪ್ರೇಮಿ

ಕಾಣುತ ಹೊರಟಿಹೆ ಪ್ರೇಮದ ಜೋಡಿಯ ಪ್ರೇಮಿಗಳನ್ನು ದಾರಿಯಲಿ ,
ಕಾಣಲು ಕಾಡುವ ನನ್ನಯ ಪ್ರೇಮಿಯ ನೆನಪುಗಳೆಲ್ಲವೂ ನೆನಪಿನಲ್ಲಿ ,
ನೆನಪದು ಸುಮದುರ ಆದರೆ ಮುಜುಗರ ಅವಲಿಲ್ಲದಿರೋ ಈ ಬಾಳಿನಲಿ ,
ನೆನಪನು ಉಳಿಸಿ ನಡೆದು ಹೊರಟವಳು ತಿರುಗಿಯೂ ನೋಡದೆ ಹೊರಟವಳೆಲ್ಲಿ?

ಬೇಕಾಗಿರುವದು ಪ್ರೀತಿಯು ಮಾತ್ರವೇ ಪ್ರೀತಿಸಲೆಂದು ತಿಳಿದಿದ್ಧೆ ,
ಪ್ರೀತಿಗೆ ಬೇಕಿರೋ ಕಾಸಿನ ಕವಡೆಯು ಸಂಪಾದಿಸಲು ಮರೆತಿದ್ಧೆ ,
ಸಂಪಾದನೆಯನು ಮಾಡಲು ತಿಳಿಸಲು ಬಂದವಳೆನೋ ಅನುತಿದ್ಧೆ ,
ಕಾಂಚನವಿಲ್ಲದ ಪ್ರೇಮವು ಕುರುಡು ಎಂಬುವ ಪಾಟವ ಕಲಿತಿದ್ದೆ .


By
Muralidhar Krishnamuthy

ನೇಸರನ ದಿನಚರಿ

ತಾರೆಗಳ ತೆರೆ ಮರೆಯಾಗುತಿದಂತೆ,ಮುಂಜಾವಿನ ಮಂಜು ಇಬ್ಬನಿಯಾಗಿ ಹರಡಿತು....
ಹಕ್ಕಿಗಳ ಚಿಲಿಪಿಲಿ ಸದ್ದಿಗೆ ಸಿಟ್ಟಾಗಿ ಎದ್ದ  ಸೂರ್ಯ, ಕೆಂಪಾಗಿ ಮೂಡಿದ,
ಸ್ವಲ್ಪ ಹೊತ್ತು ಸುಮ್ಮನಿದು ಬಿಸಿಯ ಶಕೆ ತೋರಿಸಿದ,
ಸಂಜೆಯ ರಾಗಕ್ಕೆ ತಂಪಾದ ಗಾಳಿಯೊಂದಿಗೆ ಸುಮ್ಮನೆ ಮನ ತಣಿಸಿದ,
ಇಡಿ ದಿನದ ಪಯಣ ಬೇಸರವೆಂಬ ನೆಪಕ್ಕೆ ನೀರಿನಲ್ಲಿ ಮುಳುಗಿಹೋದ!... 



 By Shiv  

ಕಣ್ ನೋಟ


ಹುಡುಗಿಯರ ಕಣ್ ನೋಟ ,ಹುಡುಗರಿಗೆ ಸಿಹಿ ಊಟ ,
ಹುಡುಗಿಯರ ಕಣ್ ನೋಟ ,ಹುಡುಗರಿಗೆ ಸಿಹಿ ಊಟ ,
ಮುಂದೇನಾಗುವುದೋ ಹುಡುಗರ ಜೀವನವೆಂಬ ಆಟ.


By Mallesh

ನೀನಿಲ್ಲದೆ ನಾ ಹೇಗೆ ಬಾಳಲಿ?

ಬರಡು ಭೂಮಿಯಲಿ ಮಳೆ ಸುರಿದಂತೆ...
ಮರಳುಗಾಡಿನಲಿ ನೆರಳು ದೊರೆತಂತೆ....
ಇರಳ ಕತ್ತಲಲಿ ಬೆಳಕು ಹರಿದಂತೆ .......
ನೀ ಬಂದಿರುವೆ ನನ್ನ ಬಾಳಲಿ
ನೀನಿಲ್ಲದೆ ನಾ ಹೇಗೆ ಬಾಳಲಿ?





--
By
ಸತೀಶ್ ಬಿ ಕನ್ನಡಿಗ

ಯಡ್ಡಿ ಜಪ

ನಮ್ಮ ಯಡ್ಡಿಯವರು ಕುರ್ಚಿಯ ಮೇಲೆ ಇದ್ದಾಗ ಮಾಡುತಿದ್ದರು ಒಂದೆ ಜಪ

ಜಮೀನು... ಜಮೀನು..... ಜಮೀನು,,,

ನಮ್ಮ ಯಡ್ಡಿಯವರು ಕುರ್ಚಿಯ ಮೇಲೆ ಇದ್ದಾಗ ಮಾಡುತಿದ್ದರು ಒಂದೆ ಜಪ
ಜಮೀನು.... ಜಮೀನು..... ಜಮೀನು,,,


ನಮ್ಮ ಯಡ್ಡಿಯವರು ಇಗಲೂ ಮಾಡುತಿದ್ದಾರೆ ಒಂದೆ ಜಪ
ಜಾಮೀನು... ಜಾಮೀನು... ಜಾಮೀನು....



@("_")@

ನನ್ನ ಸಂಗಾತಿ

ಓ ನನ್ನ ಗೆಳತಿ ಆಗು ನನ್ನ ಸಂಗಾತಿ.
ಓ ನನ್ನ ಗೆಳತಿ ಆಗು ನನ್ನ ಸಂಗಾತಿ.
ಆಗದಿದ್ದರೆ ನನ್ನ ಸಂಗಾತಿ, ನಾ ಆಗುವೆ,
ಮುಂಗಾರು ಮಳೆಯಾ ಗಣೇಶನ ರೀತಿ...
 
 
By Mallesh

ಮಗುವಿನ ನಗುವಿಗಾಗಿ

ಕಲ್ಪನೆಯ ಕಡಲಲ್ಲಿ ಮಂಜಿನ ನಸುಕಿನ ಮಡಿಲಲ್ಲಿ
ಸೂರ್ಯಕಾಂತಿಯ ಬೆಳಕಿನಂತೆ ಹೊರಬಂದೆ
ರಾತ್ರಿಯ ಸೊಬಗಿನ ಆಕಾಶದ ಮಿನುಗು ನಕ್ಷತ್ರಗಳ ನಡುವಲ್ಲಿ
ಬಿಳಿಯ ಚಂದಿರನ ಮೊಗದಂತೆ ನೀ ಕಂಡೆ

ಸಧ್ಧು ಗದ್ದಲಧ ಕೋಲಾಹಲ ಎಬ್ಬಿಸಿಧೆ ಓ ನನ್ನ ಕಂದಮ್ಮ
ನಿನ್ನ ಚೆಲುವ ನಾ ಹೇಗೆ ಬರೆಯಲಿ ಈ ನನ್ನ ಪುಟ್ಟ ಕವನದಲಿ
ನಿನ್ನ ಅ ಸಧ್ಧಲ್ಲು ಎನಗೆ ಏನೋ ಉಲ್ಲಾಸ ಮೂಡಿದೆ

ಸಂತಸದ ಕ್ಷಣ ಮುಗಿಲನ್ನು ಮುಟ್ಟಿ ಬಂದಂತೆ
ನಿಷ್ಕಲ್ಮಶ ನಿನ್ನ ನಗು ನನ್ನ ಮನಸೂರೆಗೊಂಡಿಧೆ
ಕೂಸೆ ನೀ ನನ್ನ ಕನಸು..ನಗುತಲಿರು ನೀ ಎಂಧೂ,
ಜೊತೆಯಲಿರುವೆ ನಿನ್ನ ನೆರಳಂತೆ ನಾ ಎಂದೆಂಧು ......
 
 
 
 
By Vrajs

ಕಂಬನಿಯ ಹನಿಯಲ್ಲಿ

ತುಂತುರು ಹನಿಯ
ಮಿಂಚು ಗುಡುಗಿನ ಮಧ್ಯೆ ಸದ್ದಿಲದೆ  ಬಂದ ಆ ಕ್ಷಣ..
ನೆನಪಾಧೆ ನೀನು..
ತಣ್ಣನೆ  ಗಾಳಿಯ ನಡುವೆ..
ರೋಮಗಳೆಲ್ಲ ಗಧಿರೆಧ್ಧು ನಿಂತಾಗ..
ನೆನಪಾಧೆ ನೀನು..
ಕಂಬನಿಯು ಮೌನಕ್ಕೆ ಮೊರೆ ಹೋಗುವಾಗ
ಎದುರು ಕಂಡ ಪುಟ್ಟ ಕಂದಮ್ಮನ ನಗು ಕಂಡಾಗ
ನೆನಪಾಧೆ ನೀನು
ಹೀಗೇಕೆ ಓ ಪ್ರಾಣವೇ ಕೊಲ್ಲೂವೆ ಯೆನ್ನನೂ
ಪ್ರತಿ ನೆನಪಲ್ಲೂ ಎನ್ ಮೊಗದಲ್ಲಿ ಅರೆ ಕ್ಷಣದಲ್ಲಿ ನಗೆ ತರಿಸಿ
ಮರು ಕ್ಷಣದಲ್ಲಿ ಕಂಬನಿಯ ಸುರಿಸುವೆ
ಆ ಕಂಬನಿಯ ಹನಿಯಲ್ಲೂ ನೆನಪಾಧೆ ನೀನು.. :)


By Vrajs :)

Prompt ಹುಡುಗಿಯರು


ಹುಡುಗಿಯರೇ ಹಾಗೆ ತುಂಬಾ Prompt ಆಗೇ ಇರ್ತಾರೆ..
ಹುಡುಗಿಯರೇ ಹಾಗೆ ತುಂಬಾ Prompt ಆಗೇ ಇರ್ತಾರೆ..
ಪರ್ಸ್(Purse) ಕಾಲಿ ಆಗುವತನಕ ಜೊತೆ ಜೊತೆಯಾಗಿಯೇ  ಇರ್ತಾರೆ.....



By Shiv

ಅನುದಿನವು ಕಾಣುವೆನು

ಅನುದಿನವು  ಕಾಣುವೆನು  ಅವಳ  ಕನಸನ್ನ
ಅವಳನ್ನು  ವರಿಸಲು  ಸಹಕರಿಸಿ  ನನ್ನ
ಕವಿತೆಗಳ  ಬರೆಯಲು  ನಾ  ಕಾಳಿದಾಸ
ಅವಳೆನಗೆ  ಸಿಗದಿರೆ  ನಾ  ದೇವದಾಸ ...!


ಹರ್ಷಾ...
shree.h563@gmail.com

ಹುಡುಗಿಯ ನೆನಪು


ಕಲ್ಪನೆಯ ಕನ್ನೆಗೆ ಕನಸುಗಳ ಮಾಲೆ,
ಮನಸಿನ ಭಾವನೆಗೆ ನಗುವೆ ಸೆಳೆ,
ಸುಂದರ ರಾತ್ರಿಯಲಿ ಕನಸುಗಳ ಮಳೆ,
ಕನಸಿನಲಿ ಕಾಡುವಳು ಆ ನನ್ನ ನಲ್ಲೆ...... 


By  Murugesh Shilavanta

ನನ್ನ ಕಣ್ಣೀರಿದೆ

ನಿನ್ನ ಬಳಿ ಮಾತಾನಡದ ಪದಗಳನ್ನು
ಕಾಗದದ ಮೇಲೆ ಚೆಲ್ಲಿದೇನೆ
ದಯವಿಟ್ಟು ಓದಿಬಿಡು ,
ಕೆಲವು ಕಡೆ ಪದಗಳಿಲ್ಲ
ನನ್ನ ಕಣ್ಣೀರಿದೆ
ಅದನ್ನ ಅಲ್ಲಿ ಯಾದರು ಮರಿಯದೆ ಒರಸಿಬಿಡು !
 




-- ಪ್ರಕಾಶ್ ಶ್ರೀನಿವಾಸ್

ಪ್ರೀತಿ ಇಲ್ಲ


ಪ್ರೀತಿ ಇಲ್ಲ
ಎನುವುದಾದರೆ ......
ನಾವಿಬ್ಬರು ನಡೆಯುವಾಗ ಒಂದೇ
ನೆರಳು ಬೀಳುವುದೇಕೆ ....
ಆ ಒಂದೇ
ನೆರಳಿನಲ್ಲಿ ನಾವಿಬ್ಬರು ಕಾಣುವುದೇಕೆ ...!! }



 

-- ಪ್ರಕಾಶ್ ಶ್ರೀನಿವಾಸ್

ಮರವನೆಲ್ಲ ಕಡಿದು


ಮರವನೆಲ್ಲ ಕಡಿದು ಸುಸ್ತಾದ ಮಾನವ ವಿಶ್ರಮಿಸಲು,
ಹುಡುಕುತ್ತಿದ್ದಾನೆ ಮರದಡಿಯ ನೆರಳನ್ನು.


 
-- ಪ್ರಕಾಶ್ ಶ್ರೀನಿವಾಸ್

----ನಿನ್ನ ನಗು ----


ಸುಖವಿರಲಿ ದುಖ:ವಿರಲಿ,
ಕನಸಿರಲಿ  ನನಸಿರಲಿ...
ಜೀವನದ  ಪ್ರತಿಯೊಂದು  ಕ್ಷಣದಲ್ಲೂ
ಮನದಲ್ಲಿನ  ಪ್ರತಿಯೊಂದು  ಕಣದಲ್ಲೂ...
ಕಾಯುತ್ತಿರುವೆ  ನಿನ್ನ  ಆ  ಒಂದು  ನಗುವಿಗಾಗಿ ,,,, 









                            -----ಪುಟ್ಟು 

 bharatgs7@gmail.com

ಶಿಲೆ.....!!


ಅವಳು ನನಗಿಲ್ಲ ಎಂದೊಡನೆ
ನನ್ನ ಮನಸ್ಸನ್ನು
ಕಲ್ಲಾಗಿಸಿಕೊಂಡೆ
ಆದರೆ ಅಲ್ಲೂ ಶಿಲೆಯಾಗಿ
ಅವಳೇ ...!!!





-- ಪ್ರಕಾಶ್ ಶ್ರೀನಿವಾಸ್

ನಿನಗೆ ತಿಳಿಯದು


ನೀನು ಸುಂದರವಾಗಿರುವುದರಿಂದಲೇ
ನಾನು ನಿನ್ನನ್ನು ಪ್ರೀತಿಸುತ್ತಿದ್ದೆನೆಂದು  ಗರ್ವ ಪಡೆಯದಿರು,
ನನ್ನ ಪ್ರೀತಿಯೇ ನಿನ್ನ ಸುಂದರವಾಗಿಸಿತೆಂದು ನಿನಗೆ ತಿಳಿಯದು. !!

-- ಪ್ರಕಾಶ್ ಶ್ರೀನಿವಾಸ್


ಹೂ -ದುಂಬಿ

ನೀನು ದುಂಬಿಯಾದರೆ ನಾ ಹೂ ಆಗುವೆ,
ನೀನು ದುಂಬಿಯಾದರೆ ನಾ ಹೂ ಆಗುವೆ,
ಆದರೂ ನೀನೇಕೆ ಹೂವಿಂದಾ ಹೂವಿಗೆ ಹಾರಿ ಹೋಗುವೆ????? 



ಮನಸಲ್ಲಿರೋದನ್ನ

ಮನಸಲ್ಲಿರೋದನ್ನ ಮನಸಲ್ಲೇ ಬಿಡೋಕೆ ಮನಸಿಲ್ಲ,
ಕನಸಲ್ಲಿ ಬರೋದನ್ನ ಬರಿ ಕನಸಾಗಿಸೋಕೆ ಮನಸೊಪ್ಪುತ್ತಿಲ್ಲ,
ಮನಸು ಕನಸಿನ ನಡುವೆ ಏನಾಗುವೆನೋ ಗೊತ್ತಿಲ್ಲ..


ಕವನವನ್ನು ಕಳುಹಿಸಿದವರು :- ದೀಪು... (kndileep@gmail.com)

ಅವಳನ್ನೆ ನೋಡ್ತೀನಿ

ಅವಳನ್ನೆ ನೋಡ್ತಿನಿ ಅಂತ Complaint ಕೊಡ್ತಾಳೆ ,

ಅವಳನ್ನೆ ನೋಡ್ತಿನಿ ಅಂತ Complaint ಕೊಡ್ತಾಳೆ, 

ಹಾಗಾದರೆ ನಾ ನೋಡಿದಾಗಲೆಲ್ಲಾ, ಅವಳು ನನ್ನಾ ನೋಡೆ ಇರ್ತಾಳೆ....



ಪೋಸ್ಟ್ ಮಾಡಿದವರು Shiv... 


 

ಹಗಲು ರಾತ್ರಿ

ಹಗಲು ರಾತ್ರಿ ನೆನೆಯುವೆ ನಾ ನಿನ್ನ
ಪ್ರೀತಿಸು ಒಮ್ಮೆ ನನ್ನ,
ಪಡೆದಿರಲಾರೆ ಈ ಪ್ರೀತಿಯ ಇದಕು ಮುನ್ನ,

ಕವನವನ್ನು ಕಳುಹಿಸಿದವರು :- ದೀಪು... (kndileep@gmail.com)

A World I Never Made 

ಮಲಗುವ ವೇಳೆ

ಮಲಗುವ ವೇಳೆ ನಿನ್ನ ನಾ ನೆನೆದೆ,
ಮಲಗಿದಾಗ ಕನಸಲ್ಲಿ ನೀ ಬಂದೆ,
ಕನಸೆಂದು ತಿಳಿದು ನಾ ನೊಂದೆ,
ಸದಾ ಚಿಂತೆ ನನಗೆ ನಿಂದೆ,
ನನ್ನೀ ಪ್ರೀತಿಯು ನಿನಗೆ ತಿಳಿಯದೆ?
ಕವನವನ್ನು ಕಳುಹಿಸಿದವರು :- ದೀಪು... (kndileep@gmail.com)

The Lincoln Lawyer: A Novel

ನೆನೆದ ಕಲ್ಲು (ಸ್ಫರ್ಶ ಚಿತ್ರದ್ದು)






ನೆನೆದು ನೆನೆದು ನಿರಿನಲ್ಲಿ ಯಾವ ಕಲ್ಲು ಮೆತ್ತಗಾಗಲಿಲ್ಲ,
ನೆನೆದು ನೆನೆದು ನಿರಿನಲ್ಲಿ ಯಾವ ಕಲ್ಲು ಮೆತ್ತಗಾಗಲಿಲ್ಲ,

ಒಂದೆ ಒಂದು ಬಾರಿ ನಿನ್ನ ನೆನೆದು ನಾನೆಷ್ಟು ಮೆತ್ತಗಾದೆನಲ್ಲ,
ನಾನೇಕೆ ಕಲ್ಲಾಗಲಿಲ್ಲಾ????????????

ಕಾರಿನ ಮೇಲೆ....

ಕಾರಿನ ಮೇಲೆ ನಾವು ಹೋದರೆ ಉಲ್ಲಾಸ ಉಲ್ಲಾಸ,
ಕಾರಿನ ಮೇಲೆ ನಾವು ಹೋದರೆ ಉಲ್ಲಾಸ ಉಲ್ಲಾಸ,
ನಮ್ಮ ಮೇಲೆ ಕಾರು ಹೋದರೆ ಕೈಲಾಸ ಕೈಲಾಸ.....

  

Gouda's Story

Kumar Swamy and Devegouda story told in 2 Lines...
 ಕತ್ತೆ ಮರಿ ಚಿಕ್ಕದಿದ್ದಾಗ ಮುದ್ದಾಗಿಯೆ ಇತ್ತು,,
ಕತ್ತೆ ಮರಿ ಚಿಕ್ಕದಿದ್ದಾಗ ಮುದ್ದಾಗಿಯೆ ಇತ್ತು,,
ದೊಡ್ಡದಾಗುತಿದ್ದಂತೆ ತನ್ನ ಅಪ್ಪನಂತೆ ಹಾಳಾಗಿ ಹೋಯಿತು.... @("_")@

ಅವಳೆನೂ ಪರವಾಗಿಲ್ಲಾ...

ಅವಳೆನೂ ಪರವಾಗಿಲ್ಲಾ ಅವಾಗ ಅವಾಗಾ ನಗತಾಳೆ,
ಅವಳೆನೂ ಪರವಾಗಿಲ್ಲಾ ಅವಾಗ ಅವಾಗಾ ನಗತಾಳೆ,
ಅವಳ್ ತಮ್ಮಾನೆ ಸರಿ ಇಲ್ಲಾ ಯಾವಾಗ್ಲು ಅಣ್ಣಾ ಆಣ್ಣಾ ಅಂತಾನೆ.... @("_")@

A World I Never Made

Ishtadha Hooo....

ಅವಳಿಗೆ ಇಷ್ಟಪಟ್ಟ   ಅವಳಿಗೊಂದು ಹೂ ಕೊಟ್ಟ,
ಅವಳಿಗೆ ಇಷ್ಟಪಟ್ಟ, ಅವಳಿಗೊಂದು ಹೂ ಕೊಟ್ಟ,
ಇವಾಗ ಅವರಿಬ್ಬರ ಮಗನ ಹೆಸರು ಪುಟ್ಟ....
21