ಇಷ್ಟೇ!


ಉಸಿರಲೆಗಳ ಏರಿಳಿತದೊಳಗೆ|
ಹೋರಾಡುವ ಜೀವನ ಉಸಿರ-ಅಂತ್ಯದವರೆಗೆ|
-ಪಡುವ ಪಾಡೆಷ್ಟೋ? ಅನಂತದೊಳಗೆ|
ಸೇರಿ ಲೀನವಾಗುತ್ತದೆ..!!
ಅದೆಷ್ಟೋ ಬದಲಾವಣೆಯ ಪದರಗಳು|
ಬದಲಾವಣೆಯೇ ಬದಲಾದ ಉದಾಹರಣೆಗಳು|
ಉದಾಹರಣೆಗಳೇ ಉದಾಹರಣೆಗಳಾದ ಗಮ್ಮತ್ತುಗಳು|
ಎಲ್ಲದರ ಮಧ್ಯೆ ಕಲ್ಪನೆಯೇ ಬದುಕು||
ಆ ಬದುಕಿಗೊಂದಷ್ಟು ಸಮ್ಮಿಷ್ರದ ತುಣುಕುಗಳು|
ತೋಗುಯ್ಯಾಲೆಯಂತೆ ಮುಂದೆ ಹೋದಷ್ಟೇ-
ವೇಗವಾಗಿ ಹಿಂದೆ- ಹಿಂದೆ ಹೋದಷ್ಟೇ ವೇಗವಾಗಿ ಮುಂದೆ!!
ಈ ಕಾಲಲೋಲಕದ ಮಧ್ಯೆ ಭಾರ ಹೆಚ್ಚಾದರೆ;
ನೇರ ನೆಲಕ್ಕಪ್ಪಳಿಸಿ ಬದುಕಿಗೊಂದು ಪೂರ್ಣವಿರಾಮ|
ನಿತ್ಯನಿರಂತರ ಆರಾಮ 
ಎಲ್ಲ ಮುಗಿದ ಬಳಿಕ ಕೈಚೆಲ್ಲಿ ತೆಗೆದುಕೊಳ್ಳುವ  
ನಿರ್ಧಾರ ---ಇಷ್ಟೇ !!||
                                                     By Shyamili suvarna




ಪ್ರೀತಿಯ ಮಮತೆ

-->
ನಿನ್ನ ಕೋಮಲವಾದ ವದನದಲ್ಲಿ, ಕಾಡುತಿರುವ ಕಂಗಳಲಿ,
ಕಿರುನಗುವ ಅಂದ ಅದರದಲಿ, ನಾನಿರುವೆ ನಿನ್ನಲ್ಲಿ.
ಬಳ್ಳಿ ಅಪ್ಪಿದ ಮರದಲಿ, ಬಿಳಿ ಹೂಗಳ ಕಂಪಲಿ,
ಬೆಳ್ಳಕ್ಕಿಗಳ ಇಂಪಲಿ, ಹಸಿರು ಹಾಸಿಗೆಯ ಚೆಲ್ಲಿ.
ನಾ ಕಂಡೆ ನಿನ್ನ ಆ ಲತೆಗಳಲಿ. 

ಮಾತಲಿ ಹೇಳಲಾಗದು, ಕತೆಯಲಿ ಬರೆಯಲಾಗದು,
ಈ ಪ್ರೀತಿಯಾ ಹೇಳದೆ ಇರಲಾಗದು, ಹೇಳಲು ಮಾತಲಿ ಬಲ ಬಾರದು,
ನೀನೆ ಹೇಳು ಏನು ಮಾಡುವುದು?

ನಿನ್ನ ಪ್ರೀತಿಯ ಅಮಲಲ್ಲಿ ನಾನಿರುವೆ,
ಹಗಲು ಇರುಳು ನಿನಗಾಗಿ ಕಾದಿರುವೆ 
ಕೆಲಸ ಕಾರ್ಯವೆಲ್ಲ ಬದಿಗಿಟ್ಟುರುವೆ
ನೀನೆಂದು ನನಗಾಗಿ ಬರುವೆ?

ಸದಾಕಾಲ ಬೆಳಗುತ್ತಿರಲಿ ನಮ್ಮ ಪ್ರೀತಿಯ ಹಣತೆ,
ನನ್ನ ಮನ ಬಯಸುತ್ತಿದೆ ನಿನ್ನ ಮಮತೆ,
ನಾ ಸೂರ್ಯನನು ಹುಡುಕುವ ಸೂರ್ಯಕಾಂತಿಯಂತೆ 
ನಿನಗೆ ಅರ್ಪಣೆ ಈ ಹೃದಯ ಗೀತೆ... 
                          From-Anjana





 

ಅರಳಿದ ಕನಸು

ಪ್ರಿತಿಯಲ್ಲಿ  ಚಿಗುರಿತು ನನ್ನ ಕನಸು,
ಆಸೆಯಲ್ಲಿ ಅರಳಿತು ನನ್ನ ಮನಸು.. 
ನನ್ನ ಮನಸು ನನಸಾಗಿದೆ, ನಾ ಕಂಡ ಕನಸು.. 
ಬಾಡದಿರಲಿ ಹೂವಿನಂತ ಮನಸು, ಎಂದಿಗೂ ನಿ ನನ್ನ ಪ್ರಿತಿಸು...

                                                                                                 ಜಗದಿಶ....


Software


ಹೃದಯವೆಂಬ "Hardware" ನಲ್ಲಿ ಮನಸೆಂಬ "Operating System" ಹರಿದಾದುತಿದೆ,
ಪ್ರೀತಿ ಎಂಬ "Software" Install ಮಾಡಿದ್ದೆ,,,,,,,,,,
ಕೆಲವರು ಹೇಳ್ತಾರೆ "Happiness" ಅನ್ನೋ "Functionality" is Good,
ಇನ್ನು ಕೆಲವರು ಹೇಳ್ತಾರೆ ಇದರಲ್ಲಿ ಮೋಸಾ ಅನ್ನೋ "Bug" ಇದೆ .... 



By Shiv

ಕಣ್ಣೀರಾಗಿ ಹೊರಬರುತ್ತಿದೆ

ಪ್ರಿಯೆ! ನಿನ್ನ ನಗುವಿನ ಕ್ಷಣಗಳನ್ನು ! ನನ್ನ ಹೃದಯದಲ್ಲಿ ಶೇಕರಿಸಿದ್ದೆ ,
ಇಂದು ಎಲ್ಲವೂ ಕಣ್ಣೀರಾಗಿ ಹೊರಬರುತ್ತಿದೆ...
ಆ ಕಣ್ಣೀರಿನ ಹನಿಗಳಿಂದ ಮತ್ತಷ್ಟು ಎತ್ತರಕ್ಕೆ ನನ್ನ ಪ್ರೀತಿ ಬೆಳೆಯುತಿದೆ !

By -ಪ್ರಕಾಶ್ ಶ್ರೀನಿವಾಸ್  
 
 

ಕಾಯುತ್ತಿರು ಗೆಳತಿ

ಕಾಯುತ್ತಿರು ಗೆಳತಿ ನಾ ಬರುವೆ ನಿನ್ನಲ್ಲಿಗೆ,
 ಕಾಯುತ್ತಿರು ಗೆಳತಿ ನಾ ಬರುವೆ ನಿನ್ನಲ್ಲಿಗೆ ...
ಮರೆಯದೆ ತರುವೆ!ಎಂದೂ ಬಾಡದ ಕವಿತೆಗಳೆಂಬ ಮಲ್ಲಿಗೆ..!!



By -ಪ್ರಕಾಶ್ ಶ್ರೀನಿವಾಸ್

ಯಾರೂ ಇಲ್ಲ ನಮ್ಮೋರು

ಮನುಷ್ಯರು ಕೆಲವೊಮ್ಮೆ ಬದಲಾಗಬಹುದು!
ಅವರ ಭಾವನೆಗಳು ಅವರನ್ನ ಬದಲಾಯಿಸಲುಬಹುದು!

ಹೋದಾಗ ಎತ್ತರ, ಬರುವರು ಹತ್ತಿರ.
ಬಿದ್ದಾಗ ಕೆಳಗ, ಹೋಗುವರು ಹೊರಗೆ.
ನಮ್ಮ ಸಂಬಂಧಿಕರು!

ಇಲ್ಲಿ ಯಾರೂ ಇಲ್ಲ ನಮ್ಮೋರು,
 ಕತ್ತರಿಸಬೇಕು ಮತ್ತೆ ಬೆಳೆಯದ ಹಾಗೆ,
ಬೇಡವಾದ ಸಂಬಂಧಗಳ ಬೇರು!
ಬೆರಳನ್ನು ದಾಟುವಾಗ ಕತ್ತರಿಸುವ ಹಾಗೆ ಉಗುರು..!!



By ಪ್ರಕಾಶ್ ಶ್ರೀನಿವಾಸ್

ಒಲಿದವನ ಎದೆಯಲ್ಲಿ

ಬಾ ನನ್ನ ನಲ್ಲ

ಹೊತ್ತು ಮುಳುಗುವ ಹೊತ್ತು, ಇಬ್ಬನಿ ಜಾರುತಲಿತ್ತು
ಇನಿಯ ನಾ ಕಾದೆ ನಿನಗಾಗಿ, ಈ ಲೋಕವ ಮರೆತು
ಗಂಟೆಗಳು ಉರುಳುತಿವೆ, ರವಿಯ ಕಿರಣ ಸರಿಯುತಿದೆ
ಬಾ ನನ್ನ ನಲ್ಲ ಎಲ್ಲಿರುವೆ ನೀ ...............
ಓ ಮುದ್ದು ಮನಸೇ...........



By Anu