ಯಡ್ಡಿ ಜಪ

ನಮ್ಮ ಯಡ್ಡಿಯವರು ಕುರ್ಚಿಯ ಮೇಲೆ ಇದ್ದಾಗ ಮಾಡುತಿದ್ದರು ಒಂದೆ ಜಪ

ಜಮೀನು... ಜಮೀನು..... ಜಮೀನು,,,

ನಮ್ಮ ಯಡ್ಡಿಯವರು ಕುರ್ಚಿಯ ಮೇಲೆ ಇದ್ದಾಗ ಮಾಡುತಿದ್ದರು ಒಂದೆ ಜಪ
ಜಮೀನು.... ಜಮೀನು..... ಜಮೀನು,,,


ನಮ್ಮ ಯಡ್ಡಿಯವರು ಇಗಲೂ ಮಾಡುತಿದ್ದಾರೆ ಒಂದೆ ಜಪ
ಜಾಮೀನು... ಜಾಮೀನು... ಜಾಮೀನು....@("_")@

ನನ್ನ ಸಂಗಾತಿ

ಓ ನನ್ನ ಗೆಳತಿ ಆಗು ನನ್ನ ಸಂಗಾತಿ.
ಓ ನನ್ನ ಗೆಳತಿ ಆಗು ನನ್ನ ಸಂಗಾತಿ.
ಆಗದಿದ್ದರೆ ನನ್ನ ಸಂಗಾತಿ, ನಾ ಆಗುವೆ,
ಮುಂಗಾರು ಮಳೆಯಾ ಗಣೇಶನ ರೀತಿ...
 
 
By Mallesh

ಮಗುವಿನ ನಗುವಿಗಾಗಿ

ಕಲ್ಪನೆಯ ಕಡಲಲ್ಲಿ ಮಂಜಿನ ನಸುಕಿನ ಮಡಿಲಲ್ಲಿ
ಸೂರ್ಯಕಾಂತಿಯ ಬೆಳಕಿನಂತೆ ಹೊರಬಂದೆ
ರಾತ್ರಿಯ ಸೊಬಗಿನ ಆಕಾಶದ ಮಿನುಗು ನಕ್ಷತ್ರಗಳ ನಡುವಲ್ಲಿ
ಬಿಳಿಯ ಚಂದಿರನ ಮೊಗದಂತೆ ನೀ ಕಂಡೆ

ಸಧ್ಧು ಗದ್ದಲಧ ಕೋಲಾಹಲ ಎಬ್ಬಿಸಿಧೆ ಓ ನನ್ನ ಕಂದಮ್ಮ
ನಿನ್ನ ಚೆಲುವ ನಾ ಹೇಗೆ ಬರೆಯಲಿ ಈ ನನ್ನ ಪುಟ್ಟ ಕವನದಲಿ
ನಿನ್ನ ಅ ಸಧ್ಧಲ್ಲು ಎನಗೆ ಏನೋ ಉಲ್ಲಾಸ ಮೂಡಿದೆ

ಸಂತಸದ ಕ್ಷಣ ಮುಗಿಲನ್ನು ಮುಟ್ಟಿ ಬಂದಂತೆ
ನಿಷ್ಕಲ್ಮಶ ನಿನ್ನ ನಗು ನನ್ನ ಮನಸೂರೆಗೊಂಡಿಧೆ
ಕೂಸೆ ನೀ ನನ್ನ ಕನಸು..ನಗುತಲಿರು ನೀ ಎಂಧೂ,
ಜೊತೆಯಲಿರುವೆ ನಿನ್ನ ನೆರಳಂತೆ ನಾ ಎಂದೆಂಧು ......
 
 
 
 
By Vrajs