ನೇಸರನ ದಿನಚರಿ

ತಾರೆಗಳ ತೆರೆ ಮರೆಯಾಗುತಿದಂತೆ,ಮುಂಜಾವಿನ ಮಂಜು ಇಬ್ಬನಿಯಾಗಿ ಹರಡಿತು....
ಹಕ್ಕಿಗಳ ಚಿಲಿಪಿಲಿ ಸದ್ದಿಗೆ ಸಿಟ್ಟಾಗಿ ಎದ್ದ  ಸೂರ್ಯ, ಕೆಂಪಾಗಿ ಮೂಡಿದ,
ಸ್ವಲ್ಪ ಹೊತ್ತು ಸುಮ್ಮನಿದು ಬಿಸಿಯ ಶಕೆ ತೋರಿಸಿದ,
ಸಂಜೆಯ ರಾಗಕ್ಕೆ ತಂಪಾದ ಗಾಳಿಯೊಂದಿಗೆ ಸುಮ್ಮನೆ ಮನ ತಣಿಸಿದ,
ಇಡಿ ದಿನದ ಪಯಣ ಬೇಸರವೆಂಬ ನೆಪಕ್ಕೆ ನೀರಿನಲ್ಲಿ ಮುಳುಗಿಹೋದ!...  By Shiv  

ಕಣ್ ನೋಟ


ಹುಡುಗಿಯರ ಕಣ್ ನೋಟ ,ಹುಡುಗರಿಗೆ ಸಿಹಿ ಊಟ ,
ಹುಡುಗಿಯರ ಕಣ್ ನೋಟ ,ಹುಡುಗರಿಗೆ ಸಿಹಿ ಊಟ ,
ಮುಂದೇನಾಗುವುದೋ ಹುಡುಗರ ಜೀವನವೆಂಬ ಆಟ.


By Mallesh

ನೀನಿಲ್ಲದೆ ನಾ ಹೇಗೆ ಬಾಳಲಿ?

ಬರಡು ಭೂಮಿಯಲಿ ಮಳೆ ಸುರಿದಂತೆ...
ಮರಳುಗಾಡಿನಲಿ ನೆರಳು ದೊರೆತಂತೆ....
ಇರಳ ಕತ್ತಲಲಿ ಬೆಳಕು ಹರಿದಂತೆ .......
ನೀ ಬಂದಿರುವೆ ನನ್ನ ಬಾಳಲಿ
ನೀನಿಲ್ಲದೆ ನಾ ಹೇಗೆ ಬಾಳಲಿ?

--
By
ಸತೀಶ್ ಬಿ ಕನ್ನಡಿಗ