ಪ್ರೀತಿಯ ಮಮತೆ

-->
ನಿನ್ನ ಕೋಮಲವಾದ ವದನದಲ್ಲಿ, ಕಾಡುತಿರುವ ಕಂಗಳಲಿ,
ಕಿರುನಗುವ ಅಂದ ಅದರದಲಿ, ನಾನಿರುವೆ ನಿನ್ನಲ್ಲಿ.
ಬಳ್ಳಿ ಅಪ್ಪಿದ ಮರದಲಿ, ಬಿಳಿ ಹೂಗಳ ಕಂಪಲಿ,
ಬೆಳ್ಳಕ್ಕಿಗಳ ಇಂಪಲಿ, ಹಸಿರು ಹಾಸಿಗೆಯ ಚೆಲ್ಲಿ.
ನಾ ಕಂಡೆ ನಿನ್ನ ಆ ಲತೆಗಳಲಿ. 

ಮಾತಲಿ ಹೇಳಲಾಗದು, ಕತೆಯಲಿ ಬರೆಯಲಾಗದು,
ಈ ಪ್ರೀತಿಯಾ ಹೇಳದೆ ಇರಲಾಗದು, ಹೇಳಲು ಮಾತಲಿ ಬಲ ಬಾರದು,
ನೀನೆ ಹೇಳು ಏನು ಮಾಡುವುದು?

ನಿನ್ನ ಪ್ರೀತಿಯ ಅಮಲಲ್ಲಿ ನಾನಿರುವೆ,
ಹಗಲು ಇರುಳು ನಿನಗಾಗಿ ಕಾದಿರುವೆ 
ಕೆಲಸ ಕಾರ್ಯವೆಲ್ಲ ಬದಿಗಿಟ್ಟುರುವೆ
ನೀನೆಂದು ನನಗಾಗಿ ಬರುವೆ?

ಸದಾಕಾಲ ಬೆಳಗುತ್ತಿರಲಿ ನಮ್ಮ ಪ್ರೀತಿಯ ಹಣತೆ,
ನನ್ನ ಮನ ಬಯಸುತ್ತಿದೆ ನಿನ್ನ ಮಮತೆ,
ನಾ ಸೂರ್ಯನನು ಹುಡುಕುವ ಸೂರ್ಯಕಾಂತಿಯಂತೆ 
ನಿನಗೆ ಅರ್ಪಣೆ ಈ ಹೃದಯ ಗೀತೆ... 
                          From-Anjana

 

No comments:

Post a Comment