ಹುಡುಗಿಯ ನೆನಪು


ಕಲ್ಪನೆಯ ಕನ್ನೆಗೆ ಕನಸುಗಳ ಮಾಲೆ,
ಮನಸಿನ ಭಾವನೆಗೆ ನಗುವೆ ಸೆಳೆ,
ಸುಂದರ ರಾತ್ರಿಯಲಿ ಕನಸುಗಳ ಮಳೆ,
ಕನಸಿನಲಿ ಕಾಡುವಳು ಆ ನನ್ನ ನಲ್ಲೆ...... 


By  Murugesh Shilavanta

ನನ್ನ ಕಣ್ಣೀರಿದೆ

ನಿನ್ನ ಬಳಿ ಮಾತಾನಡದ ಪದಗಳನ್ನು
ಕಾಗದದ ಮೇಲೆ ಚೆಲ್ಲಿದೇನೆ
ದಯವಿಟ್ಟು ಓದಿಬಿಡು ,
ಕೆಲವು ಕಡೆ ಪದಗಳಿಲ್ಲ
ನನ್ನ ಕಣ್ಣೀರಿದೆ
ಅದನ್ನ ಅಲ್ಲಿ ಯಾದರು ಮರಿಯದೆ ಒರಸಿಬಿಡು !
 
-- ಪ್ರಕಾಶ್ ಶ್ರೀನಿವಾಸ್

ಪ್ರೀತಿ ಇಲ್ಲ


ಪ್ರೀತಿ ಇಲ್ಲ
ಎನುವುದಾದರೆ ......
ನಾವಿಬ್ಬರು ನಡೆಯುವಾಗ ಒಂದೇ
ನೆರಳು ಬೀಳುವುದೇಕೆ ....
ಆ ಒಂದೇ
ನೆರಳಿನಲ್ಲಿ ನಾವಿಬ್ಬರು ಕಾಣುವುದೇಕೆ ...!! } 

-- ಪ್ರಕಾಶ್ ಶ್ರೀನಿವಾಸ್

ಮರವನೆಲ್ಲ ಕಡಿದು


ಮರವನೆಲ್ಲ ಕಡಿದು ಸುಸ್ತಾದ ಮಾನವ ವಿಶ್ರಮಿಸಲು,
ಹುಡುಕುತ್ತಿದ್ದಾನೆ ಮರದಡಿಯ ನೆರಳನ್ನು.


 
-- ಪ್ರಕಾಶ್ ಶ್ರೀನಿವಾಸ್