ಪರಿಚಯ

ಇರುವ  ಊರು ದೂರಾದರೇನು, 
ಆಡುವ ಭಾಷೆ ಬೇರಾದರೇನು,
ಭಾವಗಳು ಒಂದಾದರೆ ಸಾಲದೇ.
ಸುಟ್ಟು ಮನದೊಳಗಣ ಸಂಶಯ,
ಮೌನವ ಮುರಿದು ಒಂದೆರಡು ಮಾತುಗಳಾಡಿ,
ಬೆಳೆಸೋಣ ಬನ್ನಿ ಪರಿಚಯ.
 
 
 
 
By Shivu...

ಮನದಾಳದ ಮಾತು

ಮನದಾಳದ ಮಾತು,
ನಿನ್ನ ಎದುರಲ್ಲಿ ನಿಂತು,
ಹೇಳುವುದರಲ್ಲೇ ಮರೆತ್ಹೋಯಿತು.

ನನ್ನೀ ಕಂಗಳ ಇಣುಕಿ ನೋಡು,
ಮರೆತ ಆ ಮಾತಿನ ಭಾವವು,
ಇನ್ನು ಮಿಂಚಂತೆ ಹೊಳೆಯುತಿಹುದು.By Shivu...