ಕಾಯುತ್ತಿರು ಗೆಳತಿ

ಕಾಯುತ್ತಿರು ಗೆಳತಿ ನಾ ಬರುವೆ ನಿನ್ನಲ್ಲಿಗೆ,
 ಕಾಯುತ್ತಿರು ಗೆಳತಿ ನಾ ಬರುವೆ ನಿನ್ನಲ್ಲಿಗೆ ...
ಮರೆಯದೆ ತರುವೆ!ಎಂದೂ ಬಾಡದ ಕವಿತೆಗಳೆಂಬ ಮಲ್ಲಿಗೆ..!!



By -ಪ್ರಕಾಶ್ ಶ್ರೀನಿವಾಸ್

ಯಾರೂ ಇಲ್ಲ ನಮ್ಮೋರು

ಮನುಷ್ಯರು ಕೆಲವೊಮ್ಮೆ ಬದಲಾಗಬಹುದು!
ಅವರ ಭಾವನೆಗಳು ಅವರನ್ನ ಬದಲಾಯಿಸಲುಬಹುದು!

ಹೋದಾಗ ಎತ್ತರ, ಬರುವರು ಹತ್ತಿರ.
ಬಿದ್ದಾಗ ಕೆಳಗ, ಹೋಗುವರು ಹೊರಗೆ.
ನಮ್ಮ ಸಂಬಂಧಿಕರು!

ಇಲ್ಲಿ ಯಾರೂ ಇಲ್ಲ ನಮ್ಮೋರು,
 ಕತ್ತರಿಸಬೇಕು ಮತ್ತೆ ಬೆಳೆಯದ ಹಾಗೆ,
ಬೇಡವಾದ ಸಂಬಂಧಗಳ ಬೇರು!
ಬೆರಳನ್ನು ದಾಟುವಾಗ ಕತ್ತರಿಸುವ ಹಾಗೆ ಉಗುರು..!!



By ಪ್ರಕಾಶ್ ಶ್ರೀನಿವಾಸ್

ಒಲಿದವನ ಎದೆಯಲ್ಲಿ

ಬಾ ನನ್ನ ನಲ್ಲ

ಹೊತ್ತು ಮುಳುಗುವ ಹೊತ್ತು, ಇಬ್ಬನಿ ಜಾರುತಲಿತ್ತು
ಇನಿಯ ನಾ ಕಾದೆ ನಿನಗಾಗಿ, ಈ ಲೋಕವ ಮರೆತು
ಗಂಟೆಗಳು ಉರುಳುತಿವೆ, ರವಿಯ ಕಿರಣ ಸರಿಯುತಿದೆ
ಬಾ ನನ್ನ ನಲ್ಲ ಎಲ್ಲಿರುವೆ ನೀ ...............
ಓ ಮುದ್ದು ಮನಸೇ...........



By Anu

ಬಚಿಟ್ಟ ಪ್ರೀತಿ

ನಿನ್ನನ್ನೆ ಬಚ್ಚಿಟರೆನು ಪ್ರೀತಿ ತುಂಬಿರದ ನಿನ್ನ ಮಾತುಗಳು,
ನಿನ್ನನ್ನೆ ಬಚ್ಚಿಟರೆನು ಪ್ರೀತಿ ತುಂಬಿರದ ನಿನ್ನ ಮಾತುಗಳು,
ಪ್ರೀತಿಯನ್ನು ಮುಚ್ಚಿ ಇಡಲಾರವು ನನ್ನನೆ ತುಂಬಿಕೊಂಡಿರುವ ನಿನ್ನ ಕಣ್ಣುಗಳು...

                                                                                                                                                        ಸವಿತ

ಹಾಲು ಜೇನು

ಪ್ರೀತಿಯಲಿ ಗೆಲುವೊಂದೆ ಇದ್ದರೆ ಅದು ನಿನಗಿರಲಿ,
ಸೋಲೊಂದೆ ಇದ್ದರೆ ಅದು ನನಗಿರಲಿ.....
ಸೋಲು ಗೆಲುವು ಎರಡು ಇದ್ದರೆ ಅವು,
ನಮ್ಮ ಬಾಳಲ್ಲಿ ಹಾಲು ಜೇನಿನಂತಿರಲಿ.......
                                                           ಸವಿತ




ಬೀಸುತಿಹುದು ತಂಗಾಳಿ

ಬೀಸುತಿಹುದು ತಂಗಾಳಿ ಎಂದು ಕೊಂಡೆ, ಸ್ಪರ್ಶಿಸಿದಾಗಲೇ ಗೊತ್ತಾಗಿದ್ದು ಅದು ಬಿರುಗಾಳಿ ಎಂದು..
ಬೀಸುತಿಹುದು ತಂಗಾಳಿ ಎಂದು ಕೊಂಡೆ, ಸ್ಪರ್ಶಿಸಿದಾಗಲೇ ಗೊತ್ತಾಗಿದ್ದು ಅದು ಬಿರುಗಾಳಿ ಎಂದು..
ನೀ ಸ್ಪರ್ಶಿಸದಿದ್ದರೇನು ತಂಗಾಳಿ ತರಹ, ಸ್ಪರ್ಶಿಸದಿರು ನೀ ಬಿರುಗಾಳಿ ತರಹ......
                                                                                                              ಸವಿತ


ನಿನ್ನ ರೂಪ

ಕಲ್ಲಲಿ ಕಂಡಿದ್ದೆ ಆ ದೇವರ ರೂಪ ನೀ ಬರುವ ತನಕ.
ಕಲ್ಲಲಿ ಕಂಡಿದ್ದೆ ಆ ದೇವರ ರೂಪ ನೀ ಬರುವ ತನಕ.
ಎದುರಲ್ಲೇ ಕಂಡಿರುವೆ ನೀನು ಆರದಾ ದೀಪಾ,
ಆರದಿರು ಎಂದಿಗೂ ನೀ ನನ್ನ ಉಸಿರು ಇರುವತನಕ...



By ಸವಿತ 

ಅಂಗನೆಯ ಕಂಗಳು