ಇಷ್ಟೇ!
ಉಸಿರಲೆಗಳ ಏರಿಳಿತದೊಳಗೆ|
ಹೋರಾಡುವ ಜೀವನ ಉಸಿರ-ಅಂತ್ಯದವರೆಗೆ|
-ಪಡುವ ಪಾಡೆಷ್ಟೋ? ಅನಂತದೊಳಗೆ|
ಸೇರಿ ಲೀನವಾಗುತ್ತದೆ..!!
ಅದೆಷ್ಟೋ ಬದಲಾವಣೆಯ ಪದರಗಳು|
ಬದಲಾವಣೆಯೇ ಬದಲಾದ ಉದಾಹರಣೆಗಳು|
ಉದಾಹರಣೆಗಳೇ ಉದಾಹರಣೆಗಳಾದ ಗಮ್ಮತ್ತುಗಳು|
ಎಲ್ಲದರ ಮಧ್ಯೆ ಕಲ್ಪನೆಯೇ ಬದುಕು||
ಆ ಬದುಕಿಗೊಂದಷ್ಟು ಸಮ್ಮಿಷ್ರದ ತುಣುಕುಗಳು|
ತೋಗುಯ್ಯಾಲೆಯಂತೆ ಮುಂದೆ ಹೋದಷ್ಟೇ-
ವೇಗವಾಗಿ ಹಿಂದೆ- ಹಿಂದೆ ಹೋದಷ್ಟೇ ವೇಗವಾಗಿ ಮುಂದೆ!!
ಈ ಕಾಲಲೋಲಕದ ಮಧ್ಯೆ ಭಾರ ಹೆಚ್ಚಾದರೆ;
ನೇರ ನೆಲಕ್ಕಪ್ಪಳಿಸಿ ಬದುಕಿಗೊಂದು ಪೂರ್ಣವಿರಾಮ|
ನಿತ್ಯನಿರಂತರ ಆರಾಮ
ಎಲ್ಲ ಮುಗಿದ ಬಳಿಕ ಕೈಚೆಲ್ಲಿ ತೆಗೆದುಕೊಳ್ಳುವ
ನಿರ್ಧಾರ ---ಇಷ್ಟೇ !!||
By Shyamili suvarna
YAMANUR029@GMAIL.COM
ReplyDelete